ತೆಲುಗು Youtuber ಹರ್ಷ ಸಾಯಿ ಈಗ ಗಂಭೀರ ಕಾನೂನು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. 2024ರ ಸೆಪ್ಟೆಂಬರ್ನಲ್ಲಿ, ಹರ್ಷ ಸಾಯಿ ವಿರುದ್ಧ ಬಲಾತ್ಕಾರ ಮತ್ತು ಬ್ಲಾಕ್ಮೇಲ್ ಆರೋಪಗಳು ಹೊರ ಬಿದ್ದಿವೆ . ತೆಲುಗು ಚಿತ್ರರಂಗದ ನಿರ್ಮಾಪಕೆಯೊಬ್ಬರು, ಅವರು ದೈಹಿಕ ಮತ್ತು ಆರ್ಥಿಕ ಶೋಷಣೆಗೆ ಒಳಗಾಗಿದ್ದಾರೆಂದು ನರ್ಸಿಂಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹರ್ಷ ಅವರು ಅವ್ರು ವಿವಾಹ ಪ್ರಸ್ತಾಪದ ಹೆಸರಿನಲ್ಲಿ ತಮಗೆ ₹2 ಕೋಟಿ ಮೋಸ ಮಾಡಿದ್ದು, ಅವರ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಬ್ಲಾಕ್ಮೇಲ್ ಮಾಡಲು ಬಳಸಿದ್ದಾರೆ ಎಂಬ ಆರೋಪಗಳು ಹೊರ ಬರುತ್ತಿವೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹರ್ಷನ ವಿರುದ್ಧ ಬಲಾತ್ಕಾರ ಮತ್ತು ಮಹಿಳಾ ಸನ್ಮಾನಕ್ಕೆ ಧಕ್ಕೆ ತರುವುದು ಎಂಬ ಐಪಿಸಿ ಸೆಕ್ಷನ್ 376 ಮತ್ತು 354 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಪರಿಶೀಲನೆಯಿಂದ ಸಾಕ್ಷ್ಯಾಧಾರಗಳು ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಹರ್ಷ ಸಾಯಿ ತಮ್ಮ Youtube channelಮೂಲಕ social services ಕೆಲಸಗಳಿಗಾಗಿ ಪ್ರಸಿದ್ಧರಾಗಿದ್ದರು, ಆದರೆ ಈ ಪ್ರಕರಣದಿಂದಾಗಿ ಅವರ ಭವಿಷ್ಯ ಶಂಕೆಯಲ್ಲಿದೆ. ಈ ಬೆಳವಣಿಗೆಗಳು ತೆಲುಗು ಚಲನಚಿತ್ರ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕ್ಷೇತ್ರದಲ್ಲಿ ದೊಡ್ಡ ಆಘಾತ ಉಂಟುಮಾಡಿವೆ.
ಇದನ್ನು ಗಮನದಲ್ಲಿಟ್ಟು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ, ಹಾಗೂ ಹರ್ಷ ಸಾಯಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿದೆ.
ಹಾಗೆ ಇನ್ನು ನಮ್ಮನ್ನು ಯಾರು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿಲ್ಲ ಬೇಗ ಫಾಲೋ ಮಾಡಿ ಇದೇ ರೀತಿ ಮತ್ತಷ್ಟು ಇನ್ಫಾರ್ಮಶನ್ ತಿಳಿಯಲು ಧನ್ಯವಾದ.